ಭಾಗೀರಥಿ ಹೆಗಡೆ ಕನ್ನಡದ ಹೊಸ ಪೀಳಿಗೆಯ ಪ್ರಸಿದ್ಧ ಲೇಖಕಿ. ಕರ್ನಾಟಕ ಸರ್ಕಾರದ ಕಿತ್ತೂರು ಚೆನ್ನಮ್ಮ ವಿಜೇತರಾದ ಇವರು ಕನ್ನಡದಲ್ಲಿ ಸಣ್ಣ ಕತೆ, ಕವಿತೆ, ನಾಟಕ, ಕಾದಂಬರಿ, ಪ್ರಬಂಧ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. == ಜನನ- ಜೀವನ : == ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ತಟ್ಟೀಕೈ ಗ್ರಾಮದಲ್ಲಿ ೧೯೪೮ ಜುಲೈ ೨೩ರಂದು ಜನಿಸಿದರು. ಇವರ ತಂದೆ ವೆಂಕಟ್ರಮಣ ಭಟ್, ತಾಯಿ ಗಣಪಿ ಭಟ್. ಇವರ ಶಾಲಾ ಶಿಕ್ಷಣ ಐದನೇ ವರ್ಗಕ್ಕೇ ಕೊನೆಗೊಂಡರೂ, ಮದುವೆಯಾಗಿ ಮಕ್ಕಳಾದ ನಂತರ, ಬಾಹ್ಯ ಪರೀಕ್ಷೆ ಬರೆದು ಎಸ್. ಎಸ್. ಎಲ್. ಸಿ. ಹಾಗೂ ಹಿಂದಿ ಪ್ರವೇಶಿಕಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಇವರ ಹದಿನಾಲ್ಕನೇ ವಯಸ್ಸಿನಲ್ಲಿ ಅಂದಿನ ಸಂಪ್ರದಾಯದಂತೆ, ಪಕ್ಕದೂರು ಬಿಳೇಕಲ್ಲಿನ ಶ್ರೀ ಆರ್. ಎಂ. ಹೆಗಡೆಯವರೊಂದಿಗೆ ಇವರ ವಿವಾಹವಾಯಿತು. ನಂತರ ಹೈಸ್ಕೂಲ್ ಅಧ್ಯಾಪಕರಾದ ಪತಿಯೊಂದಿಗೆ ಅವರು ಸಿರಸಿಯಲ್ಲಿ ನೆಲಸಿದ್ದಾರೆ. ಇವರಿಗೆ ಮೂವರು ಹೆಣ್ಣು ಮಕ್ಕಳು ಮತ್ತು ನಾಲ್ವರು ಮೊಮ್ಮಕ್ಕಳು. == ಬರಹ: == ಬಾಲ್ಯದಲ್ಲಿ ಹವ್ಯಕ ಸಂಪ್ರದಾಯದ ಹಾಡುಗಳನ್ನು ರಚಿಸುತ್ತಿದ್ದ ಇವರು, ಕ್ರಮೇಣ ಕವಿತೆ ಬರೆಯತೊಡಗಿದರು. ತುಷಾರ ಮಾಸಪತ್ರಿಕೆಯ ಚಿತ್ರಕವನ ಸ್ಪರ್ಧೆಯಲ್ಲಿ ಭಾಗವಹಿಸುತ್ತ ಕವಿತೆಯಲ್ಲೇ ಮುಂದುವರಿದರು. ತುಷಾರದಲ್ಲೇ ಇವರ ಮೊದಲ ಕತೆ 'ನಮ್ಮೆಲಬುಗಳ ಮೇಲೆ' ಪ್ರಕಟವಾಗುವದರೊಂದಿಗೆ, ಇವರ ಕಥಾ ಪಯಣ ಪ್ರಾರಂಭವಾಯಿತು. ಇವರ ಸಣ್ಣಕತೆ, ಕವಿತೆ, ನಗೆಬರಹ, ನಾಟಕ, ವಿಮರ್ಶೆ, ಕಾದಂಬರಿ, ಶಿಶುಗೀತೆ ಇತ್ಯಾದಿ ಬರಹಗಳು ನಾಡಿನ ಬಹಳ ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಆಗುತ್ತಿವೆ. ಧಾರವಾಡ ಮತ್ತು ಕಾರವಾರ ಆಕಾಶವಾಣಿಯಲ್ಲಿ ಇವರ ಬರಹಗಳು ಪ್ರಸಾರವಾಗಿವೆ. ಚಂದನ ವಾಹಿನಿಯ ‘ಬೆಳಗು’ ಕಾರ‍್ಯಕ್ರಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ. ಈ ಟಿವಿಯ ‘ನಮಸ್ಕಾರ’ ಕಾರ‍್ಯಕ್ರಮದಲ್ಲಿ ಸಂದರ್ಶನ ಪ್ರಸಾರವಾಗಿದೆ. 'ಚಂದನ' ವಾಹಿನಿಯ 'ಕತೆಗಾರ' ಕಾರ‍್ಯಕ್ರಮದಲ್ಲಿ ಇವರ ಸಣ್ಣಕತೆಯೊಂದು ಪ್ರಸಾರವಾಗಿದೆ. ಸಿರಸಿ ಸಮೀಪದ ಕೊರ್ಲಕಟ್ಟಾ ವಿವೇಕ ಬಳಗದವರು ತಯಾರಿಸಿದ ‘ಉರಿದಾರಿ’ ಟೆಲಿಫಿಲ್ಮಿನ ಲೇಖಕಿ ಭಾಗೀರಥಿ ಹೆಗಡೆಯವರು, ತಾಯಿಯ ಪಾತ್ರದಲ್ಲಿಯೂ ಅಭಿನಯಿಸಿದ್ದಾರೆ. == ಪ್ರಕಟಣೆಗಳು: == === ಕಥಾಸಂಕಲನಗಳು: === ಸ್ವೀಕಾರ ಅರ್ಥ ಪ್ರವಾಹ ಗಿಳಿಪದ್ಮ ಬೇಟೆ ಪ್ರತಿಮೆ ಆಳ ಹಿಮನದಿ(ಆಯ್ದ ಕತೆಗಳ ಸಂಕಲನ) ಯಾತ್ರೆ === ಕವನ ಸಂಕಲನಗಳು: === ‘ಚಂದ್ರಗಾವಿ’ ‘ಒಂದುದಿನ’ === ನಾಟಕ : === ‘ಪ್ರಭಾವತಿ’ === ಮಕ್ಕಳ ಕವನ ಸಂಕಲನಗಳು: === ‘ಗುಬ್ಬಿಯ ಸ್ವರ್ಗ’ ‘ಕನ್ನಡ ಶಾಲೆಯ ಹುಡುಗ’ === ಕಾದಂಬರಿಗಳು : === ‘ಹೊಳೆಯ ಹಾದಿ’ ‘ಕಾಲಾಂತರ’ === ಇತರ: === ‘ಬಾರೆಲೆ ಹಕ್ಕಿ’ ಪ್ರಬಂಧ ಸಂಕಲನ ‘ಇಂದಿರಾಗಾಂಧಿ’ ಜೀವನ ಚರಿತ್ರೆ === ಇತರ ವಿಷಯಗಳು : === ಇವರ 'ಕನ್ನಡಮ್ಮ' ಎಂಬ ಮಕ್ಕಳ ಕವಿತೆ ಕರ್ನಾಟಕದ ಆರನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗಿದೆ. 'ರುಚಿ' ಎಂಬ ಇನ್ನೊಂದು ಕವನ ಮಹಾರಾಷ್ಟ್ರ ಸರಕಾರದ ಎಂಟನೇ ತರಗತಿಯ ಪುಸ್ತಕದಲ್ಲಿ ಸೇರ್ಪಡೆಯಾಗಿದೆ == ಬಹುಮಾನ-ಪ್ರಶಸ್ತಿಗಳು : == ಇವರ ಕಥೆಗಳು ಉತ್ಥಾನ, ಸಂಕ್ರಮಣ, ತರಂಗ, ತುಷಾರ, ವಿಕ್ರಾಂತ ಕರ್ನಾಟಕ, ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ. ಅಲ್ಲದೆ ವಿವಿಧ ಕವನ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ ದೊರೆತಿವೆ. ‘ಪ್ರಜಾವಾಣಿ’ಶಿಶುಕಾವ್ಯ ಸ್ಪರ್ಧೆಯಲ್ಲಿ ಪ್ರಥಮ -ದ್ವಿತೀಯ ಹೀಗೆ ಎರಡು ಬಾರಿ ಬಹುಮಾನಗಳು, ೨೦೧೩ರ ‘ಪ್ರಜಾವಾಣಿ’ ಸಂಕ್ರಾಂತಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ‘ಅರ್ಥ’ ಕಥಾ ಸಂಕಲನಕ್ಕೆ ಮಾಸ್ತಿ ಕನ್ನಡ ಸೇವಾನಿಧಿ ಪುರಸ್ಕಾರ ಮತ್ತು ಧಾರವಾಡದ ರತ್ನಮ್ಮ ಹೆಗ್ಗಡೆ ದತ್ತಿನಿಧಿ ಬಹುಮಾನ (೧೯೯೧) ‘ಪ್ರವಾಹ’ ಕಥಾ ಸಂಕಲಕ್ಕೆ ಎಚ್, ವಿ, ಸಾವಿತ್ರಮ್ಮ ದತ್ತಿನಿಧಿ ಬಹುಮಾನ (೧೯೯೬) ‘ಗಿಳಿಪದ್ಮ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಲಕ್ಷ್ಮಿ ದೇವಿ ಶಾಂತರಸ ದತ್ತಿಪ್ರಶಸ್ತಿ(೨೦೦೭) ‘ಪ್ರಭಾವತಿ’ ನಾಟಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ವರ್ಷ ದತ್ತಿ ನಿಧಿ ಬಹುಮಾನ(೨೦೦೨) ‘ಗುಬ್ಬಿಯ ಸ್ವರ್ಗ’ ಮಕ್ಕಳ ಪುಸ್ತಕಕ್ಕೆ ಕರ್ನಾಟಕ ಲೇಖಕಿಯರ ಸಂಘದ ಗುಣಸಾಗರಿ ನಾಗರಾಜ ಪ್ರಶಸ್ತಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ 'ಪುಸ್ತಕ ಸೊಗಸು' ಬಹುಮಾನ(೨೦೦೭) ‘ಹೊಳೆಯ ಹಾದಿ’ ಕಾದಂಬರಿಗೆ ಮುಂಬಯಿಯ ಸದಾನಂದ ಸುವರ್ಣ ಪ್ರತಿಷ್ಠಾನದ ಕಾರಂತ ಕಾದಂಬರಿ ಸ್ಪರ್ಧೆ ಬಹುಮಾನ ಮತ್ತು ಬೆಂಗಳೂರಿನ ಅತ್ತಿಮಬ್ಬೆ ಪ್ರತಿಷ್ಠಾನದ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ (೨೦೦೯) ಯಳಂದೂರಿನ ಅಂಬಾ ಪ್ರಕಾಶನದ ‘ಸಂಚಿ ಹೊನ್ನಮ್ಮ ಪ್ರಶಸ್ತಿ’(೨೦೦೯) ಉತ್ತರಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಕೆ. ಶಾಮರಾವ ದತ್ತಿ ಪ್ರಶಸ್ತಿ(೨೦೦೨) ಕರ್ನಾಟಕ ಸರ್ಕಾರದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ(೨೦೦೨) ‘ಒಂದು ದಿನ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ‘ನೀಲಗಂಗಾ ದತ್ತಿ ಪ್ರಶಸ್ತಿ’(೨೦೧೪) ‘ಕನ್ನಡ ಶಾಲೆಯ ಹುಡುಗ’ ಮಕ್ಕಳ ಪದ್ಯ ಸಂಕಲನಕ್ಕೆ ಬೆಂಗಳೂರಿನ ವಿಶ್ವೇಶ್ವರಯ್ಯ ಟ್ರಸ್ಟಿನ ರಾಷ್ಟೀಯ ಪ್ರಶಸ್ತಿ(೨೦೧೪) ಬೆಂಗಳೂರಿನ ಅಗ್ನಿಸೇವಾ ಟ್ರಸ್ಟಿನ ‘ಮಹಾಕವಿ ಪರಮದೇವ ಪ್ರಶಸ್ತಿ’(೨೦೧೫) ಉತ್ತರ ಕರ್ನಾಟಕ ಲೇಖಕಿಯರ ಸಂಘದ ಶಾಂತಾದೇವಿ ಕಣವಿ ಕಥಾ ಪ್ರಶಸ್ತಿ(೨೦೧೯) ಹೊನ್ನಾವರದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಪುರಸ್ಕಾರ(೨೦೨೦ ಫೆ.) ಕರ್ನಾಟಕ ಸರ್ಕಾರದ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ(೨೦೨೨) 'ಕಾಲಾಂತರ' ಕಾದಂಬರಿಗೆ ಬೆಂಗಳೂರಿನ ಸರಳಾ ರಂಗನಾಥದ ಪ್ರತಿಷ್ಠಾನದ ಪ್ರಶಸ್ತಿ ಹೀಗೆ ಒಟ್ಟೂ 39 ವಿವಿಧ ಸಾಹಿತ್ಯ ಪ್ರಶಸ್ತಿ, ಬಹುಮಾನಗಳು ದೊರೆತಿವೆ. == ಸಂದ ಗೌರವಗಳು: == ಉತ್ತರ ಕನ್ನಡ ಜಿಲ್ಲಾ ೧೯ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ(೨೦೧೪) ಕುಮಟಾದಲ್ಲಿ ನಡೆದ ಉ. ಕ. ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ,(೨೦೦೬) ಸಿರ್ಸಿ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ(೨೦೧೧) ಸ್ವರ್ನವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳಿಂದ ‘ಸಾಹಿತ್ಯ ಸರಸ್ವತಿ’ ಬಿರುದು ಹಾಗೂ ಸನ್ಮಾನ(೨೦೦೭) ಸಿರ್ಸಿಯ ಆದರ್ಶ ವನಿತಾ ಸಮಾಜ, ರೋಟರಿ ಕ್ಲಬ್, ಅಭಿಮಾನ ಸಾಂಸ್ಕೃತಿಕ ವೇದಿಕೆ, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ, ಕೆ ಎಸ್. ಆರ್. ಟಿ. ಸಿ.ಕನ್ನಡ ಕ್ರಿಯಾ ಸಮಿತಿ. ಅಖಿಲ ಹವ್ಯಕ ಮಹಾಸಭಾ ಬೆಂಗಳೂರು, ಹೀಗೆ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನಗಳು ದೊರೆತಿವೆ. == ಬಾಹ್ಯ ಕೊಂಡಿ : == 1. ಬುಕ್ ಬ್ರಹ್ಮ : ://..//- == ಉಲ್ಲೇಖಗಳು == ಮಾತೃ ಭಾಷೆಯಲ್ಲೇ ಶಿಕ್ಷಣ ನೀಡಿ ' ಭಾಗೀರಥಿ ಹೆಗಡೆ - ಉದಯವಾಣಿ 28-11-2011 'ನೈತಿಕತೆ ಪತನ, ಸಮಸ್ಯೆ ಉಲ್ಭಣ' - ಪ್ರಜಾವಾಣಿ 2-1-2007 'ಕನ್ನಡ ಲೇಖಕರಲ್ಲಿ ಸಾಹಿತ್ಯ ..." ಪ್ರಜಾವಾಣಿ 12-6-2007 'ಅನುಭವ ಅನುಭಾವಗಳಿಗೆ ಧ್ವನಿಯಾಗುವದೇ ಸಾಹಿತ್ಯ' ಕನ್ನಡ ಜನಾಂತರಂಗ 21-5-2006